
ಜೂನ್ ತಿಂಗಳು ಬಳಿ ಸುಳಿದು
ಕೈ ಬೀಸಿ ಕರೆದಿದೆ ನನ್ನ
ಶಾಲೆ ಶುರುವಾಗಿದೆ ಬಾ ಚಿನ್ನ ।।
ಎರಡು ತಿಂಗಳು ಕಳೆದು ಹೋಯಿತು
ಸೋಂಬೇರಿತನವ ಸಾಕಿ ಸಲುಹಿತು
ಮೆದುಳಿಗೆ ತುಕ್ಕು ಹಿಡಿದ ಅನುಭವ
ನರನಾಡಿಗಳ ಕೋಪದ ರುದ್ರ ತಾಂಡವ।।
ಓ ನನ್ನ ಶಾಲೆ ಏಕಿಷ್ಟು ಅವಸರ ನಿನಗೆ
ಬರಬಾರದೇ ಮುಂದಿನ ತಿಂಗಳ ಕೊನೆಗೆ
ಬಾಕಿ ಉಳಿದಿರುವಾಗ ಇಷ್ಟೊಂದು ಆಟ
ಯಾಕಿಷ್ಟು ಬೇಗ ಸುಮ್ಮನೆ ಲೆಕ್ಕದ ಪಾಠ ।।
ನೀ ಹೇಳು ತಾಯಿ ಶಾಲೆಗೆ ವಾಪಸ್ಸು ಹೋಗಲು
ಯಾವ ಶಾಲೆಗಿಲ್ಲ ಧೈರ್ಯ ನಿನ್ನ ಮಾತು ಮೀರಲು
ಬೇಕಾದ್ದು ಕಲಿಯುವೆ ನಾನು ನಿನ್ನ ಮಡಿಲಲ್ಲೇ
ಬೇರೆ ಯಾವ ಶಾಲೆಗೆ ಹೋಗಲು ನಾ ಒಲ್ಲೆ ।।
--
ಗುರುರಾಜ