ಪುಟಗಳು

ಭಾನುವಾರ, ನವೆಂಬರ್ 27, 2016

ಗಂಡ ಹೆಂಡಿರ ಜಗಳ


Image result for husband wife fight


ಅವರಿಬ್ಬರ ನಡುವೆ

ಶುರುವಾದ ಸಣ್ಣ  ಸಮರ
ನಾ ಮೇಲೆ ತಾ ಮೇಲೆ
ಎಂದು ಹಾರುವ ಅಹಂ ಭ್ರಮರ।।

 ಅವನಿಗೆ ಅವಳೇ
ಸೋಲಬೇಕೆನ್ನುವ ಬಯಕೆ
ಅವಳಿಗೋ ಅವನೇ ಸೋಲಲಿ
ಎಂದು ದೇವರಲ್ಲಿ ಹರಕೆ ।।

 ಅಡುಗೆ ಮನೆಯಲಿ
ಪಾತ್ರೆಗಳ ಮುಂದೆ ಅವಳ ಭಾಷಣ
ಜೋರಾಗಿ ಕೂಗಿ ಹೇಳಿದಳು
ಯಾರಾದರೂ ನಂಗೆ ಕೊಡಿ ಒಂದಿಷ್ಟು ಪಾಷಾಣ।।

 ಈತ ಕೋಣೆ ಒಳಗೆ ಕುಳಿತು
ಏನು ಕೇಳಿದರು ಕೇಳದ ಹಾಗೆ
ಕಿಟಕಿಯ ಆಚೆ ನೋಡಿ ಸುಮ್ಮನೆ ಕೂಗಿದನು
ಇಷ್ಟು ರಾತ್ರಿಯಲ್ಲೂ ಯಾಕೆ ಕೂಗತ್ತೆ ಈ ಕಾಗೆ ।।

ಹೀಗೆ ಸಮಯ ಜಾರಿತು
ಮಾತುಗಳ ಜಾಗ ಖಾಲಿ ಮಾಡಿದವು
ಆದರೇನಂತೆ ಮಾತುಗಳ ಜಾಗ
ಆ ಮೌನದ ಪಾಲಾದವು।।

ಹೀಗೆ ರಾತ್ರಿಯಾಯಿತು
ಮಲಗುವ ಸಮಯ
ಆದರೂ ಇಬ್ಬರ ನಡುವೆ
ನಡೆಯಲಿಲ್ಲ ಮಾತಿನ ವಿನಿಮಯ ।।

ಆಗ ಮೌನ ಮುರಿಯಲು ಕಾರಣವಾಯ್ತು
ಅಲ್ಲೇ ಇದ್ದ ಜಿರಳೆ
ಹಾರಿ ಹೋಗಿ ಅವಳೇ ಮೇಲೆ ಕುಳಿತು
ಶುರು ಮಾಡಿತು ತರಲೆ ।।

ಕೂಗಿದಳು ಕಾಪಾಡಿ ಎಂದು
ಹಾರಿ ಹೋಯಿತು ಮಹಡಿ
ಗಂಡ ಬಂದು ಓಡಿಸಿ ಹೇಳಿದ
ಇದು ಬರಿ ಜಿರಳೆ ಅಲ್ಲ ಕರಡಿ ।।

ಅಲ್ಲಿಗೆ ಮುಗಿಯುತು ಅವರಿಬ್ಬರ ಜಗಳ
ಹಾಕಿದರು ಕೋಣೆಯ ಬಾಗಿಲ ಚಿಲಕ
ಎಂದಿನಂತೆ ಗಂಡ ಹೆಂಡಿರ ಜಗಳ
ಉಂಡು ಮಲಗುವ ತನಕ ।।
---
ಗುರುರಾಜ್









ಭಾನುವಾರ, ಸೆಪ್ಟೆಂಬರ್ 11, 2016

ಮರೆಯಲಾಗದ ಪ್ರಯಾಣ (ಕಾಮಿಡಿ)

ವಿ. ಸೂ : ಇದು ಕೇವಲ ಕಾಲ್ಪನಿಕ

Image result for bus girls head resting on guy
Image courtesy :shutterstock

ಹೀಗೆ ಹೊರಟೆ ನಾ ದೂರದೂರಿಗೆ
ಏರಿ ನಮ್ಮ ಮೆಚ್ಚಿನ ಕರ್ನಾಟಕ ಸಾರಿಗೆ ।
 ಮೇಲೆ ಇಟ್ಟು  ನನ್ನ ಲಗೇಜು ಕುಳಿತೆ ಕಿಟಿಕಿಯ ಪಕ್ಕ
ಒಂದಿಷ್ಟು ಪ್ರಕೃತಿಯ ಸವಿಯುವುದು ನನ್ನ ಲೆಕ್ಕ ।।

ಲೆಕ್ಕಾಚಾರದ ನಡುವೆ ಪ್ರತ್ಯಕ್ಷಳಾದಳು  ಒಬ್ಬಳು ಚೆಲುವೆ

ಕೇಳಿದಳು "ಐದನೇ ನಂಬರಿನ ಸೀಟು ಇದುವೇ?"।
ನಾನೋ ಮೊದಲೇ ಗಾಬರಿಯ ಮನುಷ್ಯ
ಯಾವುದೋ ಯೋಚನೆಯಲಿ ನುಡಿದೆ "ಹೌದು ಶಿಷ್ಯ"।।

ಅವಳು  ಬೇರೆ ಹುಡುಗಿಯರ ಹಾಗೆ ಕೋಪಗೊಳ್ಳಲಿಲ್ಲ
ಸುಮ್ಮನೆ ಹಾಗೆ ನನ್ನ ಕಡೆ ನೋಡಿ ಗೀರಿದಳು ಹಲ್ಲ ।
ಕಣ್ಣ ಮುಂದಿದ್ದ  ಮುಂಗುರಳ ಸರಿಸಿ ಕುಳಿತಳು ನನ್ನ ಬಗಲಿಗೆ
ಯಾರೋ  ಕೂಗಿದ ಹಾಗೆ ಭ್ರಮೆ "ಲಡ್ಡೂ ಬಿತ್ತ  ನಿನ್ನ ಬಾಯಿಗೆ"।।

ಶುರುವಾಯಿತು ಕೊನೆಗೂ ನಮ್ಮ ಪಯಣ
ಅಕ್ಕಪಕ್ಕದ ಸೀಟಿನಲ್ಲಿ ಒಂಟಿ ತರುಣಿ ಒಂಟಿ ತರುಣ ।
ಎಲ್ಲರೂ  ಜಾರಿದರು ನಿದ್ರೆಗೆ, ಬಸ್ಸು ಸಾಗಿತು ಬಲು ದೂರ
ನಡುವಲ್ಲಿ ಜಾರಿ ಬಿತ್ತು  ನನ್ನ ಹೆಗಲ ಮೇಲೆ  ಅವಳ ತಲೆಯ ಭಾರ ।।

ಅವಳಿಗೋ  ಅರಿವೇ ಇಲ್ಲದಂತ ಕುಂಭಕರ್ಣನ ನಿದಿರೆ
ನನಗೆ ಸಂಶಯ  "ಇವಳು ಏರಿಸಿರುವಳಾ ಎರಡು ಪೆಗ್ಗು ಮದಿರೆ ?"।
ಏನೆ ಇರಲಿ ನಾ ಅಲುಗಾಡದೆ ಕುಳಿತೆ ಗಟ್ಟಿಯಾಗಿ
ಖುಷಿಯಿಂದ ನನ್ನ ಹೆಗಲ ಬಾಡಿಗೆಗೆ ಬಿಟ್ಟೆ ಬಿಟ್ಟಿಯಾಗಿ ।।

ಬೆಳಕು ಹರಿಯುವಷ್ಟರಲ್ಲಿ ನಾನು ಶರಣು ನಿದಿರೆಗೆ
ಅದೆಲ್ಲೋ ಇಳಿದು ಹೋದಳಂತೆ ಚೆಲುವೆ ಅವಳ ಮನೆಯ ಕಡೆಗೆ ।
ಒಂಟಿಯಾದ ಬದುಕಲಿ ಜಂಟಿಯಾಗುವ ಕನಸಿನ ದಾರುಣ ಸಾವು
ನನಗೆ ಉಳಿದಿದ್ದು ತಡೆಯಲಾಗದಷ್ಟು ಭುಜ ನೋವು ।।

------------
ಗುರುರಾಜ್

ಮಂಗಳವಾರ, ಆಗಸ್ಟ್ 23, 2016

ನಂಜಿ ನಂಜನ್ ಮದುವೆ


ಕೇಳು ಗುರುವೇ
ನಮ್ಮೂರ್ ನಾಗೆ ಇಂದು ಭಾರಿ ಮದುವೆ
ಯಾರ್ದು  ಅಂತ ಹೇಳ್ತೀವ್ನ್ ಕೇಳು
ನಂಜಿ ನಂಜನ್ ನಡುವೆ ।।

 ಸುಂದ್ರಿ ನಂಜಿ
ನಮ್ಮೂರ್ ನಲ್ಲಿ ಅವ್ಳದು ಭಾರಿ ಖದರ್ರು
ಹಳ್ಳಿ ಹೈಕ್ಳಿಗೆಲ್ಲ  ಕೇಳು
ಅವಳೇ ಭಾರಿ ಫಿಗರು ।।

 ಪ್ಯಾಟೆ ನಂಜ
ನಮ್ಮೂರ್ನಾಗೆ ಎಮ್ಮೆ ತೊಳೀತಾ ಇದ್ದ
ಪ್ಯಾಟೆಗ್ ಹೋಗಿ  ಅದೇನೋ ಓದಿ
ನಂಜಿ ಮನ್ ಸ ಗೆದ್ದ ।।

 ಇಬ್ರು ನಡ್ ವೆ ಪ್ರೀತಿ ಮೂಡಿ
ಮಾಡಿ ಲವ್ವು ಗಿವ್ವು
ಅಪ್ಪ ಅಮ್ಮನ್ ಮನ್ಸಿಗ್
ಕೊಟ್ರು ತುಂಬಾ ತುಂಬಾ ನೋವ್ವು ।।

 ಏಟೆ ಕಷ್ಟ ಬರ್ಲಿ ನಂಗೆ
ಅವಳಿಗಿವ್ನಿ ನಾನು
ಎಂದು ಎಲ್ರ ಒಪ್ಪಸೆ ಬಿಟ್ಟ
ನಂಜ ಸೂಪರ್ ಮ್ಯಾನು ।।

 ರವಿ ಮಾಮನ ಫ್ಯಾನು ನಂಜ
ಪ್ರೀತಿಲ್ ಗೆದ್ದೇ ಬಿಟ್ಟ ।
ಹಳ್ಳಿ ಹೈಕ್ಳ ಬಾಯಿಗ್ ಮಣ್ಣು
ನಂಜಂಗ್ ಗಂಡನ್ ಪಟ್ಟ ।।

 ಬಾರ್ ಲ ಸಾಕು ಟೇಮ್ ಅಗೋಯ್ತು
ಹೋಗ್ವ ಮದ್ವೆ ಮನೆಗೆ
ನಂಜ ನಂಜಿ ಜೋಡಿ ನೋಡಿ
ಮುಯ್ಯಿ ಕೊಡುವ ಕೊನೆಗೆ ।।

 ಕೇಳು ಗುರುವೇ
ನಮ್ಮೂರ್ ನಾಗೆ ಇಂದು ಭಾರಿ ಮದುವೆ
ಯಾರ್ದು  ಅಂತ ಹೇಳ್ತೀವ್ನ್ ಕೇಳು
ನಂಜಿ ನಂಜನ್ ನಡುವೆ ।।
---
ಗುರುರಾಜ್