ಪುಟಗಳು

ಶನಿವಾರ, ಮೇ 28, 2016

ನಾ ಬೆಂಗಳೂರು


ನಾ ಬೆಂಗಳೂರು
ಅದೆಷ್ಟೋ ಜನರು ಬೆಳದು ನಿಂತ ಊರು
ಅದೆಷ್ಟೋ ಜನರ  ಹೊಟ್ಟೆ ತುಂಬಿಸುವ ಊರು

ಒಂದಾನೊಂದು ಕಾಲದಲ್ಲಿ
ಎಲ್ಲಿ ನೋಡಿದರಲ್ಲಿ ಹಸಿರು
ಉದ್ಯಾನ ನಗರಿ ಎಂದು
ಪ್ರಸಿದ್ಧಿ ಆಗಿತ್ತು ನನ್ನ ಹೆಸರು

ಎಲ್ಲಿ ನೋಡಿದರಲ್ಲಿ ಕೆರೆಗಳು
ಎಲ್ಲಿ ನೋಡಿದರಲ್ಲಿ ಮರಗಳು
ಎಲ್ಲಿ ನೋಡಿದರಲ್ಲಿ ಖಾಲಿ ಜಾಗಗಳು
ಎಲ್ಲಿ ನೋಡಿದರಲ್ಲಿ ಸಂತಸ ಮನಗಳು

ಕಾಲ ಕಳೆದ ಹಾಗೆ ನಾನು ಬದಲಾದೆ
ಭಾಷೆ ಜಾತಿ ಮತ ಭೇದ  ಮಾಡದೆ
ಬಂದವರನೆಲ್ಲ ಕೈ ಚಾಚಿ ಕರೆದೆ
ಎಲ್ಲರೂ ನನ್ನ ಮಕ್ಕಳೆಂದು ಬೆಳೆಸಿದೆ

ಇಂದು ಅದೇಕೋ ನನ್ನ ಮಕ್ಕಳು
ನನ್ನ ಮರೆತಂತಿದೆ
ನನಗೆ ವಯಸ್ಸಾಗಿರಬೇಕು
ಅದಕ್ಕೆ ಈ ರೀತಿ ನನ್ನ ಜರಿದಂತಿದೆ

ಕೆಂಪೇಗೌಡರ ಬೆಂದ ಕಾಳೂರು ನಾನು
ಇಂದು ಕಾಂಕ್ರೀಟ್ ಧೂಳಲ್ಲಿ
ವಾಹನಗಳ ಚಕ್ರವ್ಯೂಹದಲ್ಲಿ
ಸುಸ್ತಾಗಿ ಬಳಲಿ ಬೆಂಡಾಗಿಹೆನು 

ಏನೆ ಇರಲಿ ನಾ ಸೋಲುವುದಿಲ್ಲ
ನಾ ಎಲ್ಲವ ಮೀರಿ ಬೆಳೆವೆ
ಎಲ್ಲರ ಮನದಲ್ಲಿ ಮನೆಗಳಲ್ಲಿ ನಗೆ ಬೀರುವೆ
ನಾ ಬೆಂಗಳೂರು
ನಾನು ನನ್ನತನವನೆಂದೂ ಮರೆವೆ
--
ಗುರುರಾಜ