ಪುಟಗಳು

ಗುರುವಾರ, ಫೆಬ್ರವರಿ 11, 2016

ಯೋಧನ ತಂದೆ



 (A view point of father who lost his son)

ನನ್ನ ಮಗನೊಬ್ಬ ಯೋಧ
ಯೋಧ !! ದೇಶ ಕಾಯುವ ಯೋಧ
ಅವನ ಕನಸಂತೆ ದೇಶ ಕಾಯಲು ಹೋದ
ಪ್ರತಿಯೊಂದು ಕ್ಷಣ ಕಣ್ಣಲಿ ಕಣ್ಣಿಟ್ಟು ಕಾದ


ವಿಧಿಯ ವಿಪರ್ಯಾಸ
ಈ ದಿನ ನನ್ನ ಮಗ ಇನ್ನಿಲ್ಲ
ದೇಶ ಕಾಯಲು ಹೋದವನ
ದೇಹವಿದು ಭಾರವುಂಟು ಉಸಿರಿಲ್ಲ

ನಾನು ಗಂಡಸು ಅಳುವ ಹಾಗಿಲ್ಲ
ಅವನ ಹೆತ್ತವ್ವ ಅಳುವ ನುಂಗೊಲ್ಲ
ಅವನ ಮಡದಿಯು ಪಾಪ ಒಬ್ಬಂಟಿಯಾಗಿಹಳು
ಅವನ ಮುಗ್ಧ ಮಗುವದು ಅದಕ್ಕೇನು ತಿಳಿದಿಲ್ಲ

ಅವನಿಗೆ ಸಾವಿನಲ್ಲೂ ಸಾರ್ಥಕತೆ
ಭಾರತೀಯರಿಗೆ ಆವನೊಬ್ಬ ದಂತಕಥೆ
ಅವನು ಸಲಾಮು ಹೊಡೆಯುವ ಧ್ವಜವಿಂದು
ಅವನ  ಬಳಿಗೆ ಬಂದು ಆವನ ಮೇಲೆ ಕುಳಿತಂತೆ

ಅವನು ಬದುಕಿದ್ದರೆ ಎಷ್ಟು ಚೆಂದವಿತ್ತು
ಆವನ್ನವ್ವ ನೀಡುವ ತುತ್ತದು ಬರಿದಾಗದಿತ್ತು  
ಅವನ ತಂಗಿ ಕಟ್ಟುವ ರಾಖಿಯದು  ಹರಿಯದಿತ್ತು
ಆವನ ಮಗ ಅಪ್ಪ ಎಂದಾಗ ಹೂ ಅನ್ನಬಹುದಿತ್ತು

ನನಗೆ ಅವನ ಬಗ್ಗೆ ಬಹಳ ಹೆಮ್ಮೆಯಿದೆ
ಆದರೆ ನಾನು ಒಬ್ಬ ತಂದೆ ನನ್ನ ಮನಸ್ಸು ಮರುಗಿದೆ
ನಾ ಸತ್ತಾಗ ಹೆಗಲು ಕೊಡಲು ಅವನಿಲ್ಲವಲ್ಲ
ಎಂಬ ಒಂದು ಸಣ್ಣ ಕೊರಗಿದೆ


ಕೊನೆಗೊಂದು ಹೇಳುವೆ
ಎಲ್ಲರೂ ಹೇಳುವಂತೆ
ನನ್ನ ಮಗ ಹುತಾತ್ಮ
ನನಗಂತೂ ನನ್ನ ಮಗ
ಎಲ್ಲವ ಮೀರಿದ ಪರಮಾತ್ಮ

----------
ಗುರುರಾಜ