ಪುಟಗಳು

ಶನಿವಾರ, ಡಿಸೆಂಬರ್ 5, 2015

ಸಾಫ್ಟ್ ವೇರ್ ಕನ್ನಡಿಗ



ಸಾಫ್ಟ್ ವೇರ್ ಲೋಕದಲ್ಲಿ
ನಾನೊಬ್ಬ ಕನ್ನಡಿಗ
ನಾ ಮಾಡುವ ಕೆಲಸವ ನೋಡಿ
ಕರೆವರೆಲ್ಲರು  ನನ್ನ "ಜಾವಾ"ಡಿಗ ।।

ಪ್ರತಿನಿತ್ಯ ಎಂಟರಿಂದ - ಹನ್ನೆರಡು ಗಂಟೆ
ಕಛೇರಿಯಲಿ ಕೋಡಿಂಗು ಫಿಕ್ಸಿಂಗು
ಮತ್ತೆ ನಾಲ್ಕು ಗಂಟೆ
ಟ್ರಾಫಿಕ್ ಜಾಮೆಂಬ ಚಕ್ರವ್ಯೂಹದಿ ಫೈಟಿಂಗು ।।

ಸುತ್ತಲಿನ ಅರ್ಧ  ಜನರು 
ಬರಿ ಮಾಡುವುದು ಪ್ರಮೋಷನ್ ಹೈಕಿಗಾಗಿ ಹೋರಾಟ
ಇನ್ನುಳಿದವರ ಲೋಕದಲ್ಲಿ
ಆನ್ ಸೈಟ್ ಗಾಗಿ  ಮ್ಯಾನೇಜರ್ ಜೊತೆಗೆ ಗುದ್ದಾಟ।।

ಸೋಮವಾರದಿಂದ ಗುರುವಾರದವರೆಗೆ
ಎಲ್ಲೆಲ್ಲು ಗಾಂಭೀರ್ಯದ ಪಥಚಲನ
ಶುಕ್ರವಾರ ಬಂತೆದರೆ ಸಾಕು
ಕಾಣುವುದು ಎಲ್ಲೆಡೆ ಚಿರ ಯೌವ್ವನ ।।

ಏಸಿ ಯಲ್ಲಿ ಕುಳಿತು ಓಡಾಡದೆ
ತಲೆ ಓಡಿಸಿ ಬೆವರದೆ ಸುಸ್ತಾಗುವರು
ಬ್ಯಾಂಕಿಗೆ ಕಟ್ಟುವ  ಬಡ್ಡಿ ಮಿತಿಮೀರಿ
ಕಂಪನಿಯಿಂದ ಕಂಪನಿಗೆ ಸ್ವಿಚ್ ಆಗುವರು।।

ನಾನು ಇವರಂತೆ  ಒಬ್ಬ
ರಿಲೀಸ್ ಮಾಡುವೆ ಜೈಲರ್  ಅಲ್ಲ
ಡೆಲಿವರಿ ಮಾಡಿಸುವೆ ವೈದ್ಯನಲ್ಲ
ಡೆವಲಪ್ಮೆಂಟ್ ಮಾಡುವೆ ರಾಜಕಾರಣಿಯಲ್ಲ॥

ಚೂರು ಪಾರು ಅಂಗ್ಲ ಹಿಂದಿ ಸೇರಿಸಿ
ಜೀವನ ಸಾಗಿಸು ತಿರುವ ಸಾಫ್ಟ್ ವೇರ್ ಕನ್ನಡಿಗ
ನನ್ನದೇ ಊರಲ್ಲಿ ನನ್ನದೇ ನಾಡಲ್ಲಿ
ಇಂದು ನಾನೊಬ್ಬ ಪರಬಾಷಿಗ ।।

--
ಗುರುರಾಜ್

ಶನಿವಾರ, ಅಕ್ಟೋಬರ್ 3, 2015

Lifeಉ


ಹುಟ್ಟಿದಾಗ ನಿನ್ weight ಎಷ್ಟು
ಬೆಳೆಯುತ್ತ ನಿನ್ rank ಎಷ್ಟು
ಮದ್ವೆ ಆಗಬೇಕಾದರೆ ನಿನ್ salary ಎಷ್ಟು
ಮದ್ವೆ ಆದ್ಮೇಲೆ ನಿನ್ ಮಕ್ಕಳು ಎಷ್ಟು
ಸಾಯೋವಾಗ ನಿನ್ ವಯಸ್ಸು ಎಷ್ಟು
ಒಟ್ಟಿನಲ್ಲಿ ಈ lifeಏ ಇಷ್ಟು ಎಷ್ಟು ಎಷ್ಟು ಎಷ್ಟು

ಬದುಕೋಕೆ ಉಸಿರಾಡಬೇಕು
ಉಸಿರಾಡೋಕೆ ದೇಹ ಗಟ್ಟಿಗಿರಬೇಕು 
ದೇಹ ಗಟ್ಟಿಯಾಗೋಕೆ ಊಟ ಮಾಡಬೇಕು
ಊಟ ಬೇಕಾದರೆ ಕೆಲಸ ಬೇಕು
ಕೆಲಸ ಬೇಕಂದ್ರೆ ಓದಿರ ಬೇಕು
ಓದೋದಿದಿಕ್ಕೆ ಶಾಲೆ ಬೇಕು
ಶಾಲೆಗೆ ಸೇರ ಬೇಕಂದ್ರೆ ದುಡ್ಡುಬೇಕು 
 ಒಟ್ಟಿನಲ್ಲಿ ಈ lifeಏ ಇಷ್ಟು
ಬೇಕು ಬೇಕು ಬೇಕು

ಒಟ್ಟಿನಲ್ಲಿ life ಇಷ್ಟೇ
"ಎಷ್ಟು ಬೇಕು" ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ
 "ಇಷ್ಟು ಸಾಕು " unknownಅ ನೆಮ್ಮದಿಯ ಉಸಿರಾಟ
"ಇನ್ನು ಬೇಕು" ಅನ್ನೋ ಜನರ ಒದ್ದಾಟ।।
--
ಗುರುರಾಜ್ 

ಭಾನುವಾರ, ಸೆಪ್ಟೆಂಬರ್ 13, 2015

ಕತ್ತಲು



ಗಾಜಿನರಮನೆಯ ಜೋಡಿಗೆ
ಬೆಳಕಿನಡಿಯಲ್ಲಿ ಕಾಡಿತು ಒಂಟಿತನ
ಅವ ಒಮ್ಮೆ ಹೊರಗೆ
ಇವಳು ಒಮ್ಮೆ ಹೊರಗೆ।।

ನಾಚಿಕೆಯ ಸರದಿಯೋ
ಕೋಪದ ಬೇಗೆಯೋ ಎಂಬ ಭಾಸ
 ಅವ ಒಮ್ಮೆ ಹೊರಗೆ
ಇವಳು ಒಮ್ಮೆ ಹೊರಗೆ।।

ಮೌನದ ಮಡಿಲಿನಲ್ಲಿ
ಮಾತದು ತೆಪ್ಪಗೆ ಮಲಗಿದಂತೆ
ಇವನ ದೃಷ್ಟಿ ಅವಳೆಡೆಗೆ
ಅವನ ದೃಷ್ಟಿ ಆಕಾಶದೆಡೆಗೆ ।।

ಕೊನೆಗದು ಕತ್ತಲೆಯ ಜಾದು
ಗಾಜಿನರಮನೆಯಲಿ ಬೆಸುಗೆ ಹಾಕಿತಂತೆ
ಅವ ಇವಳ ತೆಕ್ಕೆಗೆ
ಇವಳು ಅವನ ತೆಕ್ಕೆಗೆ।।

ಕತ್ತಲಲ್ಲು ಕೂಡ
ಬೆಳಕಿನ ಛಾಯೆಯಿದೆ ಅದು  ಸತ್ಯ
ಅದು ಕಾಣುವುದು
ಕೇವಲ ಅದನ್ನು ಹುಡುಕುವವರಿಗೆ।।

---
ಗುರುರಾಜ

ಭಾನುವಾರ, ಜೂನ್ 28, 2015

ನಾ ದೊಡ್ಡವನಾದೆ


ಕನ್ನಡಿ ಮುಂದೆ ನಿಂತು
ಚಿಗುರಿದ ಮೀಸೆ ನೋಡಿ
ಏನೋ ಉತ್ಸಾಹದಲ್ಲಿ ಖುಷಿ ಪಟ್ಟಾಗ
ನಾ ದೊಡ್ದವನಾಗಲಿಲ್ಲ

ಅವಳ ಮುಂದೆ ನಿಂತು
ಹಾಗೆ ಸುಮ್ಮನೆ ನಕ್ಕಾಗ
ಅವಳು ಕೋಪದಿ ಮೂತಿ ತಿರುಗಿಸಿಕೊಂಡು ಹೋದಾಗ
ನಾ ದೊಡ್ದವನಾಗಲಿಲ್ಲ 

 ಬರೆದ ಪರೀಕ್ಷೆಯಲಿ
ಉತ್ತಮ ಅಂಕ ಪಡೆದು
ಅಕ್ಕ ಪಕ್ಕದವರ ಹಿಂದಿಕ್ಕಿದಾಗ
ನಾ ದೊಡ್ದವನಾಗಲಿಲ್ಲ  

ಕೆಲಸಕೆ ಹೋಗಿ
ಮೊದಲ ಸಂಬಳ ತಂದೆಯ ಕೈಗೆ ಕೊಟ್ಟು
ಅವರ ಕಣ್ಣಲ್ಲಿ ಹೊಳಪ ಕಂಡಾಗ
ನಾ ದೊಡ್ಡವನಾದೆ ।।

--
ಗುರುರಾಜ