
ಸೋಮವಾರ ಬಂತೆಂದರೆ ಸಾಕು
ಕಿಕ್ಕಿರಿದ ರಸ್ತೆಗಳು
ವಾರಾಂತ್ಯದ ರಜೆ ಕಳೆದು ಬಂದ
ಕಿಕ್ಕಿಳಿದ ಜನಗಳು ।।
ಹಸಿರು ಬಣ್ಣಕ್ಕಾಗಿ
ರಣಹದ್ದಿನಂತೆ ಕಾಯುವರು
ಕೆಂಪು ಹಸಿರಾಗಲು ಸಾಕು
ರಾಕ್ಷಸರಂತೆ ಮುನ್ನುಗುವರು।।
ಸಿಕ್ಕ ಸಿಕ್ಕವರನ್ನೆಲ್ಲ ಧೂಷಿಸಿ
ಒಂದಿಬ್ಬರ ಕಡೆ ಕೈ ಸನ್ನೆ ಮಾಡಿ
ತಾವೇ ಸಂಗೀತ ಸಂಯೋಜಕರೆಂಬಂತೆ
ಹಾರನ್ ಬಾರಿಸುತ್ತ ಓಡಿಸುವರು ಗಾಡಿ ।।
ಎಲ್ಲರಿಗೂ ತಾವೆ
ಮೊದಲಾಗಬೇಕೆಂಬ ತರಾತುರಿ
ಇದೆ ಕಾರಣದಿಂದ ಎಲ್ಲರಿಗೂ
ಆಗುವುದು ಟ್ರಾಫಿಕ್ ಕಿರಿಕಿರಿ।।
ಬೇರೆಲ್ಲವನು ಬೆರಳು ಮಾಡಿ
ತೋರಿಸುವ ಮೊದಲು
ನಾವೆಲ್ಲರೂ ಇದರ ಭಾಗ ಎಂದು ಅರಿತರೆ
ಮಾತ್ರ ಜಗತ್ತಾಗುವುದು ಬದಲು।।
---
ಗುರುರಾಜ್ ಎಂ ಜೆ