
ಬಿಸಿಲು ಮಳೆ ರಾತ್ರಿ ಹಗಲೆನ್ನದೆ
ಯಾವ ಶತ್ರುವಿಗೂ ಜಗ್ಗದೆ
ಭಾರತಾಂಬೆಗೆ ಮುಡಿಪಾಗಿದೆ ನಿನ್ನೆದೆ
ಹೇಗೆ ಇರಲು ಸಾಧ್ಯ ನಿನಗೆ ಶರಣು ಎನ್ನದೆ॥
ಮೌನ ತಬ್ಬಿದ ಮಂಜಿನಲಿ
ಕ್ಷಣಕ್ಷಣವು ಕೇಳುವ ಗುಂಡಿನ ಸದ್ದಿನಲಿ
ಶತ್ರು ನಾಶದ ಗುಂಗಿನಲಿ
ಘರ್ಜಿಸುವ ನೀನೆ ನಿಜವಾದ ಗಂಡುಗಲಿ॥
ಸಾರಥಿಯೇ ಇಲ್ಲದ ಪಾರ್ಥ
ಅವಳಿಗೆ ನಿನ್ನ ಸೇವೆಯು ನಿಸ್ವಾರ್ಥ
ನಿನ್ನ ಬದುಕಿಗಿದೆ ಸಾವಿರ ಅರ್ಥ
ನಿನ್ನ ಗೌರವಿಸದಿರೆ ನಾವು ಸಾವಿಗೂ ಅಸಮರ್ಥ॥
ನಿನ್ನ ಹೆಸರು ಕೇಳಿದರೆ ಶತ್ರುವಿಗೆ ನಡುಕ
ನಿನ್ನೆದುರು ಸಿಕ್ಕರೆ ಅವನ ಜೀವನ ಕ್ಷಣಿಕ
ಸಾಹಸ ಗುಂಡಿಗೆಯಲಿ ನೀನೆ ಧನಿಕ
ನಿನ್ನ ನೆನೆಯಲು ಮನಸಲ್ಲಿ ಏನೋ ಪುಳಕ॥
ಭವ್ಯ ಭಾರತದ ಕನಸು ಹೊತ್ತು ಆ ದಿನ
ತಾಯಿ ಮುಡಿಪಿಟ್ಟಳು ಅವಳ ಈ ಕಂದನ
ನಿನ್ನಿಂದಲೆ ಬೆಳಕು ಕಾಣುತ್ತಿದೆ ಹಲವು ಜೀವನ
ಸೈನಿಕನೆ ನಿನಗೀ ನಾಗರಿಕನ ನಮನ॥
---
ಗುರುರಾಜ
ಮೌನ ತಬ್ಬಿದ ಮಂಜಿನಲಿ
ಕ್ಷಣಕ್ಷಣವು ಕೇಳುವ ಗುಂಡಿನ ಸದ್ದಿನಲಿ
ಶತ್ರು ನಾಶದ ಗುಂಗಿನಲಿ
ಘರ್ಜಿಸುವ ನೀನೆ ನಿಜವಾದ ಗಂಡುಗಲಿ॥
ಸಾರಥಿಯೇ ಇಲ್ಲದ ಪಾರ್ಥ
ಅವಳಿಗೆ ನಿನ್ನ ಸೇವೆಯು ನಿಸ್ವಾರ್ಥ
ನಿನ್ನ ಬದುಕಿಗಿದೆ ಸಾವಿರ ಅರ್ಥ
ನಿನ್ನ ಗೌರವಿಸದಿರೆ ನಾವು ಸಾವಿಗೂ ಅಸಮರ್ಥ॥
ನಿನ್ನ ಹೆಸರು ಕೇಳಿದರೆ ಶತ್ರುವಿಗೆ ನಡುಕ
ನಿನ್ನೆದುರು ಸಿಕ್ಕರೆ ಅವನ ಜೀವನ ಕ್ಷಣಿಕ
ಸಾಹಸ ಗುಂಡಿಗೆಯಲಿ ನೀನೆ ಧನಿಕ
ನಿನ್ನ ನೆನೆಯಲು ಮನಸಲ್ಲಿ ಏನೋ ಪುಳಕ॥
ಭವ್ಯ ಭಾರತದ ಕನಸು ಹೊತ್ತು ಆ ದಿನ
ತಾಯಿ ಮುಡಿಪಿಟ್ಟಳು ಅವಳ ಈ ಕಂದನ
ನಿನ್ನಿಂದಲೆ ಬೆಳಕು ಕಾಣುತ್ತಿದೆ ಹಲವು ಜೀವನ
ಸೈನಿಕನೆ ನಿನಗೀ ನಾಗರಿಕನ ನಮನ॥
---
ಗುರುರಾಜ