ಪುಟಗಳು

ಭಾನುವಾರ, ಫೆಬ್ರವರಿ 10, 2019

ಅಶೋಕ ಸಾಮ್ರಾಟ

Related image
ನಾನು ,
ನನ್ನ ಸ್ವಾರ್ಥಕೆ ಉಣಬಡಿಸಿದ ಹೋರಾಟವಿದು
ದಯೆ ದಾಕ್ಷಣ್ಯ ಕಟ್ಟಿ
ಎಲ್ಲೋ ಎಸದಂತೆ ದೂರಕೆ 
ಎದುರಿಗೆ ಬಂದವರ
ಕೊಲ್ಲುವುದೇ ಶೌರ್ಯದ ತೋರಿಕೆ ।।

ಆದರೆ
ಏನಿದು ನಾನು  ನೋಡುತ್ತಿರುವುದು
ರಕ್ತದಲಿ ಮಿಂದೆದ್ದ
ರಥ ಬೀದಿಗಳು
ಕಾಲಿಡುವ ದಾರಿಯಲಿ
ಅಡ್ಡಗಟ್ಟಿವೆ  ಭೀಕರ ಶವಗಳು ।।

ಇದು ,
ಗೆಲುವೆ ? ನನ್ನಯ ಗೆಲುವೇ
ಮೂಕ ಜನರ
ಘೋರಿಯ ಮೇಲೆ ಸಿಂಹಾಸನವೇರುವುದು
ಕಳೇಬರಹವೇ ತುಂಬಿದ
ನಾಡಲ್ಲಿ ಕಹಳೆ ಊದುವುದು ।।

ಇಲ್ಲ ,
ಗೆಲುವಲ್ಲ, ಇದು ಕುಹಕ ಮಾಡುತ್ತಿರುವ ಸೋಲು ,
ನೋವು,ಆಕ್ರಂದನ ಕೇಳಿ
ಚಿವುಗುಡುತ್ತಿವೆ ನನ್ನ ಕರ್ಣಗಳಿಂದು
ನಗುವೇ  ಮೂಡಿಸದ ಗೆಲುವು
ಅದು ಸತ್ತ ಕೊಳೆತ ಶವವೆಂದು ।।

ಸಾಕು ,
ಸಾಕು ನನಗೆ ಈ
ಯುದ್ಧ ,ಚೀರಾಟ , ಹೋರಾಟ
ನಾನಿಂದು ಅಶೋಕ ದಲಿ  ಆ ಶೋಕವನ್ನಳಿಸಿ
ಪ್ರ ಬುದ್ಧ ನಾಗಲು ಹೊರಟ ಸಾಮ್ರಾಟ ।।

--
ಗುರುರಾಜ
(ಕಳಿಂಗ ಯುದ್ಧದ ನಂತರದ ಚಿತ್ರಣ)

1 ಕಾಮೆಂಟ್‌: