ಪುಟಗಳು

ಶನಿವಾರ, ಮೇ 28, 2016

ನಾ ಬೆಂಗಳೂರು


ನಾ ಬೆಂಗಳೂರು
ಅದೆಷ್ಟೋ ಜನರು ಬೆಳದು ನಿಂತ ಊರು
ಅದೆಷ್ಟೋ ಜನರ  ಹೊಟ್ಟೆ ತುಂಬಿಸುವ ಊರು

ಒಂದಾನೊಂದು ಕಾಲದಲ್ಲಿ
ಎಲ್ಲಿ ನೋಡಿದರಲ್ಲಿ ಹಸಿರು
ಉದ್ಯಾನ ನಗರಿ ಎಂದು
ಪ್ರಸಿದ್ಧಿ ಆಗಿತ್ತು ನನ್ನ ಹೆಸರು

ಎಲ್ಲಿ ನೋಡಿದರಲ್ಲಿ ಕೆರೆಗಳು
ಎಲ್ಲಿ ನೋಡಿದರಲ್ಲಿ ಮರಗಳು
ಎಲ್ಲಿ ನೋಡಿದರಲ್ಲಿ ಖಾಲಿ ಜಾಗಗಳು
ಎಲ್ಲಿ ನೋಡಿದರಲ್ಲಿ ಸಂತಸ ಮನಗಳು

ಕಾಲ ಕಳೆದ ಹಾಗೆ ನಾನು ಬದಲಾದೆ
ಭಾಷೆ ಜಾತಿ ಮತ ಭೇದ  ಮಾಡದೆ
ಬಂದವರನೆಲ್ಲ ಕೈ ಚಾಚಿ ಕರೆದೆ
ಎಲ್ಲರೂ ನನ್ನ ಮಕ್ಕಳೆಂದು ಬೆಳೆಸಿದೆ

ಇಂದು ಅದೇಕೋ ನನ್ನ ಮಕ್ಕಳು
ನನ್ನ ಮರೆತಂತಿದೆ
ನನಗೆ ವಯಸ್ಸಾಗಿರಬೇಕು
ಅದಕ್ಕೆ ಈ ರೀತಿ ನನ್ನ ಜರಿದಂತಿದೆ

ಕೆಂಪೇಗೌಡರ ಬೆಂದ ಕಾಳೂರು ನಾನು
ಇಂದು ಕಾಂಕ್ರೀಟ್ ಧೂಳಲ್ಲಿ
ವಾಹನಗಳ ಚಕ್ರವ್ಯೂಹದಲ್ಲಿ
ಸುಸ್ತಾಗಿ ಬಳಲಿ ಬೆಂಡಾಗಿಹೆನು 

ಏನೆ ಇರಲಿ ನಾ ಸೋಲುವುದಿಲ್ಲ
ನಾ ಎಲ್ಲವ ಮೀರಿ ಬೆಳೆವೆ
ಎಲ್ಲರ ಮನದಲ್ಲಿ ಮನೆಗಳಲ್ಲಿ ನಗೆ ಬೀರುವೆ
ನಾ ಬೆಂಗಳೂರು
ನಾನು ನನ್ನತನವನೆಂದೂ ಮರೆವೆ
--
ಗುರುರಾಜ

ಶುಕ್ರವಾರ, ಮಾರ್ಚ್ 25, 2016

ಗೋಧಿ ಬಣ್ಣ ಸಾಧಾರಣ ಮೈಕಟ್ಟು

(ಗೋಧಿ  ಮೈ ಬಣ್ಣ ಸಾಧಾರಣ ಮೈಕಟ್ಟು ವೀಡಿಯೊ ನೋಡಿದಾಗ  ಮೂಡಿ ಬಂದ ಕಾವ್ಯ)
Image result for godhi banna sadharana mykattu

ನೀ ತಂದೆಯಾದೆ
ನನ್ನ ಪ್ರತಿ ಹೆಜ್ಜೆಗೆ ಬೆಂಬಲವಾದೆ
ಬೆರಳು ಹಿಡಿದು ನೀ ನನಗೆ ದಾರಿ ದೀಪವಾದೆ
ನಾ ಬೆಳೆದು ದೊಡ್ಡವನಾದೆ

ಸಾಧನೆಯ ಪಥದಲ್ಲಿ
ನಾ ವ್ಯಸ್ತನಾದೆ
ಇದರ  ನಡುವಲ್ಲೇ
ನೀ ಅಸ್ವಸ್ಥನಾದೆ

ನೀ ಮರೆಯಾದೆ
ಯಾರಿಗೂ ಹೇಳದೆ ಎಲ್ಲಿಗೆ ಹೋದೆ
ನೀ ಮರೆತು ಹೋದೆ
ನೀನಿಂದು ದಾರಿ ತಪ್ಪಿದ ತಂದೆಯಾದೆ

ಅವರ ಹುಡುಕಲು ಇಂದು
ಒದ್ದಾಡುತಿರುವೆ ತಲೆಕೆಟ್ಟು
ಯಾರಿಗಾದರು ಸಿಕ್ಕರೆ ಹೇಳಿ ಸ್ವಲ್ಪ
ಅವರದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ।।
--
ಗುರುರಾಜ್ 

ಗುರುವಾರ, ಫೆಬ್ರವರಿ 11, 2016

ಯೋಧನ ತಂದೆ



 (A view point of father who lost his son)

ನನ್ನ ಮಗನೊಬ್ಬ ಯೋಧ
ಯೋಧ !! ದೇಶ ಕಾಯುವ ಯೋಧ
ಅವನ ಕನಸಂತೆ ದೇಶ ಕಾಯಲು ಹೋದ
ಪ್ರತಿಯೊಂದು ಕ್ಷಣ ಕಣ್ಣಲಿ ಕಣ್ಣಿಟ್ಟು ಕಾದ


ವಿಧಿಯ ವಿಪರ್ಯಾಸ
ಈ ದಿನ ನನ್ನ ಮಗ ಇನ್ನಿಲ್ಲ
ದೇಶ ಕಾಯಲು ಹೋದವನ
ದೇಹವಿದು ಭಾರವುಂಟು ಉಸಿರಿಲ್ಲ

ನಾನು ಗಂಡಸು ಅಳುವ ಹಾಗಿಲ್ಲ
ಅವನ ಹೆತ್ತವ್ವ ಅಳುವ ನುಂಗೊಲ್ಲ
ಅವನ ಮಡದಿಯು ಪಾಪ ಒಬ್ಬಂಟಿಯಾಗಿಹಳು
ಅವನ ಮುಗ್ಧ ಮಗುವದು ಅದಕ್ಕೇನು ತಿಳಿದಿಲ್ಲ

ಅವನಿಗೆ ಸಾವಿನಲ್ಲೂ ಸಾರ್ಥಕತೆ
ಭಾರತೀಯರಿಗೆ ಆವನೊಬ್ಬ ದಂತಕಥೆ
ಅವನು ಸಲಾಮು ಹೊಡೆಯುವ ಧ್ವಜವಿಂದು
ಅವನ  ಬಳಿಗೆ ಬಂದು ಆವನ ಮೇಲೆ ಕುಳಿತಂತೆ

ಅವನು ಬದುಕಿದ್ದರೆ ಎಷ್ಟು ಚೆಂದವಿತ್ತು
ಆವನ್ನವ್ವ ನೀಡುವ ತುತ್ತದು ಬರಿದಾಗದಿತ್ತು  
ಅವನ ತಂಗಿ ಕಟ್ಟುವ ರಾಖಿಯದು  ಹರಿಯದಿತ್ತು
ಆವನ ಮಗ ಅಪ್ಪ ಎಂದಾಗ ಹೂ ಅನ್ನಬಹುದಿತ್ತು

ನನಗೆ ಅವನ ಬಗ್ಗೆ ಬಹಳ ಹೆಮ್ಮೆಯಿದೆ
ಆದರೆ ನಾನು ಒಬ್ಬ ತಂದೆ ನನ್ನ ಮನಸ್ಸು ಮರುಗಿದೆ
ನಾ ಸತ್ತಾಗ ಹೆಗಲು ಕೊಡಲು ಅವನಿಲ್ಲವಲ್ಲ
ಎಂಬ ಒಂದು ಸಣ್ಣ ಕೊರಗಿದೆ


ಕೊನೆಗೊಂದು ಹೇಳುವೆ
ಎಲ್ಲರೂ ಹೇಳುವಂತೆ
ನನ್ನ ಮಗ ಹುತಾತ್ಮ
ನನಗಂತೂ ನನ್ನ ಮಗ
ಎಲ್ಲವ ಮೀರಿದ ಪರಮಾತ್ಮ

----------
ಗುರುರಾಜ

ಶನಿವಾರ, ಡಿಸೆಂಬರ್ 5, 2015

ಸಾಫ್ಟ್ ವೇರ್ ಕನ್ನಡಿಗ



ಸಾಫ್ಟ್ ವೇರ್ ಲೋಕದಲ್ಲಿ
ನಾನೊಬ್ಬ ಕನ್ನಡಿಗ
ನಾ ಮಾಡುವ ಕೆಲಸವ ನೋಡಿ
ಕರೆವರೆಲ್ಲರು  ನನ್ನ "ಜಾವಾ"ಡಿಗ ।।

ಪ್ರತಿನಿತ್ಯ ಎಂಟರಿಂದ - ಹನ್ನೆರಡು ಗಂಟೆ
ಕಛೇರಿಯಲಿ ಕೋಡಿಂಗು ಫಿಕ್ಸಿಂಗು
ಮತ್ತೆ ನಾಲ್ಕು ಗಂಟೆ
ಟ್ರಾಫಿಕ್ ಜಾಮೆಂಬ ಚಕ್ರವ್ಯೂಹದಿ ಫೈಟಿಂಗು ।।

ಸುತ್ತಲಿನ ಅರ್ಧ  ಜನರು 
ಬರಿ ಮಾಡುವುದು ಪ್ರಮೋಷನ್ ಹೈಕಿಗಾಗಿ ಹೋರಾಟ
ಇನ್ನುಳಿದವರ ಲೋಕದಲ್ಲಿ
ಆನ್ ಸೈಟ್ ಗಾಗಿ  ಮ್ಯಾನೇಜರ್ ಜೊತೆಗೆ ಗುದ್ದಾಟ।।

ಸೋಮವಾರದಿಂದ ಗುರುವಾರದವರೆಗೆ
ಎಲ್ಲೆಲ್ಲು ಗಾಂಭೀರ್ಯದ ಪಥಚಲನ
ಶುಕ್ರವಾರ ಬಂತೆದರೆ ಸಾಕು
ಕಾಣುವುದು ಎಲ್ಲೆಡೆ ಚಿರ ಯೌವ್ವನ ।।

ಏಸಿ ಯಲ್ಲಿ ಕುಳಿತು ಓಡಾಡದೆ
ತಲೆ ಓಡಿಸಿ ಬೆವರದೆ ಸುಸ್ತಾಗುವರು
ಬ್ಯಾಂಕಿಗೆ ಕಟ್ಟುವ  ಬಡ್ಡಿ ಮಿತಿಮೀರಿ
ಕಂಪನಿಯಿಂದ ಕಂಪನಿಗೆ ಸ್ವಿಚ್ ಆಗುವರು।।

ನಾನು ಇವರಂತೆ  ಒಬ್ಬ
ರಿಲೀಸ್ ಮಾಡುವೆ ಜೈಲರ್  ಅಲ್ಲ
ಡೆಲಿವರಿ ಮಾಡಿಸುವೆ ವೈದ್ಯನಲ್ಲ
ಡೆವಲಪ್ಮೆಂಟ್ ಮಾಡುವೆ ರಾಜಕಾರಣಿಯಲ್ಲ॥

ಚೂರು ಪಾರು ಅಂಗ್ಲ ಹಿಂದಿ ಸೇರಿಸಿ
ಜೀವನ ಸಾಗಿಸು ತಿರುವ ಸಾಫ್ಟ್ ವೇರ್ ಕನ್ನಡಿಗ
ನನ್ನದೇ ಊರಲ್ಲಿ ನನ್ನದೇ ನಾಡಲ್ಲಿ
ಇಂದು ನಾನೊಬ್ಬ ಪರಬಾಷಿಗ ।।

--
ಗುರುರಾಜ್

ಶನಿವಾರ, ಅಕ್ಟೋಬರ್ 3, 2015

Lifeಉ


ಹುಟ್ಟಿದಾಗ ನಿನ್ weight ಎಷ್ಟು
ಬೆಳೆಯುತ್ತ ನಿನ್ rank ಎಷ್ಟು
ಮದ್ವೆ ಆಗಬೇಕಾದರೆ ನಿನ್ salary ಎಷ್ಟು
ಮದ್ವೆ ಆದ್ಮೇಲೆ ನಿನ್ ಮಕ್ಕಳು ಎಷ್ಟು
ಸಾಯೋವಾಗ ನಿನ್ ವಯಸ್ಸು ಎಷ್ಟು
ಒಟ್ಟಿನಲ್ಲಿ ಈ lifeಏ ಇಷ್ಟು ಎಷ್ಟು ಎಷ್ಟು ಎಷ್ಟು

ಬದುಕೋಕೆ ಉಸಿರಾಡಬೇಕು
ಉಸಿರಾಡೋಕೆ ದೇಹ ಗಟ್ಟಿಗಿರಬೇಕು 
ದೇಹ ಗಟ್ಟಿಯಾಗೋಕೆ ಊಟ ಮಾಡಬೇಕು
ಊಟ ಬೇಕಾದರೆ ಕೆಲಸ ಬೇಕು
ಕೆಲಸ ಬೇಕಂದ್ರೆ ಓದಿರ ಬೇಕು
ಓದೋದಿದಿಕ್ಕೆ ಶಾಲೆ ಬೇಕು
ಶಾಲೆಗೆ ಸೇರ ಬೇಕಂದ್ರೆ ದುಡ್ಡುಬೇಕು 
 ಒಟ್ಟಿನಲ್ಲಿ ಈ lifeಏ ಇಷ್ಟು
ಬೇಕು ಬೇಕು ಬೇಕು

ಒಟ್ಟಿನಲ್ಲಿ life ಇಷ್ಟೇ
"ಎಷ್ಟು ಬೇಕು" ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ
 "ಇಷ್ಟು ಸಾಕು " unknownಅ ನೆಮ್ಮದಿಯ ಉಸಿರಾಟ
"ಇನ್ನು ಬೇಕು" ಅನ್ನೋ ಜನರ ಒದ್ದಾಟ।।
--
ಗುರುರಾಜ್