ಆ ದಿನ ಒಬ್ಬನೇ ಸಾಗರದ ದಂಡೆಯಲಿ
ಮರಳ ಮೇಲೆ ಕುಳಿತಿರಲು ನಲಿವಿನಲಿ
ರಭಸದಿ ಬಂದ ಅಲೆಯು ಒಂದೊಂದು
ಕಥೆಯ ನುಡಿದಿತ್ತು ನನಗಂದು॥
ಸೂರ್ಯನು ಮುಳುಗಿದರೆ ಹೀಗೆ
ನಾನಂತೂ ತಾಳಲಾರೆ ಅವನ ಬೇಗೆ
ಕಾಪಾಡು ನನ್ನನು ಎಂದು ಕಿರಚುತ
ಓಡಿ ಬಂತು ಅಲೆಯು ಹೆದರುತ ॥
ಹಿಂದೆಯೇ ಬಂತೊಂದು ಅಲೆಯು ಕುಣಿಯುತ
ಹಾಗೆಯೇ ತನ್ನ ಸೊಂಟವ ಬಳಕುತ
ಹೇಳಿತು ನೋಡಲ್ಲಿ ಬಂದಿರುವನು ನನ್ನ ನಲ್ಲ
ಎಷ್ಟು ಚಂದ ಅವನ ಹಾಲು ಮುಖದ ಗಲ್ಲ ॥
ಎಷ್ಟೊಂದು ಭಿನ್ನ ಒಂದೊಂದು ಅಲೆಯ ಯೋಚನೆ
ಆಶಾವಾದ ನಿರಾಶಾವಾದದ ಕಲ್ಪನೆ
ಏಕಿಷ್ಟು ಕವಲು ಅವನ ಈ ಸೃಷ್ಟಿಯಲ್ಲಿ
ಎಲ್ಲರ ಬದುಕು ನಡೆದಿದೆ ಅವರವರ ದೃಷ್ಟಿಯಲ್ಲಿ
--
ಗುರುರಾಜ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ